Witness - ಸಾಕ್ಷಿ



ಇಂದು ಅದೇಕೋ ಖುಷಿಯಾಗಿದೆ
ಕಾರಣವಿರದೆ ಮನ ಆಕಾಶವಾಗಿದೆ
ಕ್ಷಣವೊಂದು ಯುಗವಾಗಿದೆ
ದಿನವೂ, ಕಿಚಿಗುಡುತ್ತಿದ್ದ ಹಕ್ಕಿಗಳು
ಇಂದು ಆಗಿವೆ ನನ್ನದೇ ಬಾಯ ಚಿಲಿಪಿಲಿ
ದಿನವೂ, ಸೊಂಯ್ಗುಡುತಿದ್ದ ಗಾಳಿ
ಇಂದು ಆಗಿದೆ ನನ್ನೊಳಗಿನದೇ ಉಸಿರು
ಎಂದೂ ಸ್ಪಷ್ಟವಾಗಿ ಕೇಳದ
ರೇಡಿಯೋದ ಹಾಡುಗಳು
ಇಂದಾಗಿವೆ, ಕತೆಯೊಳಗೆ ಕತೆ ಹೇಳುವ
ಅರ್ಥಗರ್ಭಿತ ಸುಂದರ ಸಿನಿಮಾಗಳು
ದಿನವೂ ಚೆಲ್ಲುತ್ತಿದ್ದ  ಮಂದ ಸೂರ್ಯನ ಬೆಳಕು
ಇಂದು ಆಗಿದೆ ಕತ್ತಲೋಡಿಸಿ
ಜಗದ ಬಣ್ಣಗಳ ತೋರಿಸುವ ಪ್ರಜ್ವಲ ಟಾರ್ಚು
ಆಗಬಾರದೇಕೆ ದಿನವೂ ಹೀಗೆ
ಕಾಣದ ಖುಷಿಯ ಈ ಮೂಲವ
ಹೇಗೆ ಹುಡುಕಿ ಹೆಕ್ಕಲಿ
ಹೇಗೆ ದಾಖಲಿಸಿ ತೋರಿಸಲಿ
ನಿಲ್ಲದೆ ಉರುಳುವ ನಾಳೆಗಳಿಗೆ
ಇಂದು ನಾನು ಹೀಗಿದ್ದೆನೆಂದು
ಬಹುಷಃ ಈ ಕವಿತೆಯೇ
ಈ ಘಳಿಗೆಗೆ ಸಾಕ್ಷಿ

Today, for no reason I am happy
For no reason, Soul has become sky
A moment has become an epoch
Daily twittering’s of birds
Today, have become my own voice
Daily whispers of wind
Today, has become my breath
Daily murmuring radio songs
Today have become cinemas
Telling stories within stories
Dim light of sun
Today has become a torch
Dispelling darkness and showing
The colors of world
Why can’t everyday be like this
How can I search and find out?
The invisible source of this happiness
How do I record this and show it?
To ever rolling tomorrows
That, I was like this
Perhaps, this poem is the
Only witness to this moment

  - ಬುರುಡೆದಾಸ 

Comments