ನಾ ಹೇಗೆ ನಾಳೆಗಳ ನೆನೆಯಲಿ
ನೀ ನನಗೆ ಮಾಡಿದ ಉಪಕಾರವ
ದಿನವೂ ನೋಡದೆ ತಿರುಗಿ
ನಾ ಹೇಗೆ ನನ್ನ ಜೀವನವ ನೆನೆಯಲಿ
ನನ್ನ ಉಸಿರ ಉಳಿಸುದದ
ದಿನವೂ ನೆನೆಯದೆ ತಿರುಗಿ
ನನಗೆ ನೆನಪಿದೆ, ಭಯವೇ
ಎದ್ದು ನ್ರತ್ಯವಾಡಿದ ಆ ದಿನ...!
ಅಂದು ನಾ ಕೂಸಿದ್ದಿರಬಹುದು, ಆದರೂ
ಕಪ್ಪು ಬೂಟುಗಳ ಕಟಗುಟ್ಟಿನಲ್ಲಿ
ಚರ್ಮದ ಜಾಕೆಟ್ಟುಗಳಲ್ಲಿ ಸರಸದ್ದಿನಲ್ಲಿ
ಅಡಗಿದ್ದ ಆ ಧೈತ್ಯನ ಪರಿಚಯವಿದ್ದಿತು
ನಾನೆಂದು ಯೋಚಿಸಿಯೂ ಇರಲಿಲ್ಲ
ಕಾಣುವುದು ನನ್ನ ಕಣ್ಣು,
ಬಂಕರುಗಳ ಆಚೆ ಅರಳುವ ಹೂವುಗಳ
ನಾನೆಂದು ಕನಸು ಕಂಡಿರಲಿಲ್ಲ
ಕಾಣುವುದು ನನ್ನ ಬಾವುಟ,
ಬೆಳಕಿನ ಸುಂದರ ಈ ಕಿರಣಗಳ
ನೀಬಂದೆ,
ಇನ್ನೇನು ಸೂರ್ಯ ಅಸ್ತ ವಾಗುವ ಮುಂದೆ
ಅಮವಾಸೆಯ ಕತ್ತಲು ಬೆಳಕ ತಿನ್ನುವ ಮುಂದೆ
ನಮ್ಮ ಭರವಸೆಯ ಒಂದೇ ಬೆಳಕಾಗಿ
ನಿನಗೆ ವಂದನೆಗಳು,
ಕೊನೆಗೂ ಬಂದದಕ್ಕಾಗಿ ...!
ನಮ್ಮ ಧ್ವನಿಗಳ ಕಳೆದುಕೊಂಡು
ಮೂಕರಗುವ ಮುಂಚೆ,
ಗೆಲ್ಲಬೇಕೆನ್ನುವರ ಮುಂದೆ,
ಸೋತು ಸುಣ್ಣವಾಗುವ ಮುಂಚೆ
ನಿನಗೆ ವಂದನೆಗಳು,
ಜಗತ್ತಿಗೆ ತೋರಿಸಿದಕ್ಕಾಗಿ...!
ಕೊಲ್ಲುವುದೊಂದೇ ಉತ್ತರವಲ್ಲೆಂದು...
ಮವವೀಯತೆಗೆ ತೋರಿಸಿದಕ್ಕಾಗಿ..!
ಅವನು ಇರುವನು,
ಸಕಲ ಜೀವಾಣುರಾಶಿಗಳೆಲ್ಲರಲ್ಲೆಂದು...
- ಬುರುಡೆದಾಸ
Comments
Post a Comment