ನನ್ನನ್ನು ಹೆಚ್ಚು ಕಾಡುವುದು
ನಿನ್ನ ಮಾತುಗಳಲ್ಲ, ಬದಲಿ ನಿನ್ನ ಮೌನ!
ಇಷ್ಟು ದಿನ ನೀನು ಎಡಬಿಡದೆ
ನನ್ನ ಸುತ್ತ ಬಡಬಡಿಸುವಾಗ
ನನಗೆ ಕನಸಿನಲ್ಲೂ ಅನ್ನಿಸಲಿಲ್ಲ
ಮುಂದೆ ನೀ ನಿಲ್ಲದಿರುವಾಗ ಒಂದು ದಿನ,
ಇದ್ಯಾವುದೂ ಇರುವುದಿಲ್ಲೆಂದು
ಕನ್ನಡಿಯ ನೋಡಿದರೆ
ನನ್ಹಿಂದೆ ನೀ ಕಾಣುವೆ
ಮೆಟ್ಟಿಲುಗಳು ಕಟಗುಟ್ಟಿದರೆ
ನಿನ್ನದೇ ಹೆಜ್ಜೆ ಸಪ್ಪಳಿಸುತ್ತದೆ
ಬಾಗಿಲ ಕರೆಗಂಟೆ ನುಡಿದರೆ
ನೀನೇ ಆಚೆ ನಿಂತಂತೆ ಅನ್ನಿಸುತ್ತದೆ
ಈಗ, ಇದೆಲ್ಲವೂ ಸುಳ್ಳೆಂದು ತಿಳಿದಾಗ
ಮತ್ತೆ ತುಂಬುತ್ತದೆ ಅದೇ ಮೌನ ಸುತ್ತೆಲ್ಲ
ಚೂರಾಗಿಸಿ, ನನನ್ನು ನುಚ್ಚು ನೂರು
ನನ್ನಾತ್ಮದ
ಇಂಚಿಂಚ ಹೀರುತ
ಕಾಲ ಎಲ್ಲವ ಮರೆಸುವಾಗ
ಯುಗಗಳೆ ಕಳೆದರೂ
ಈ ಗಾಯವೇಕೆ ಮಾಸುತ್ತಿಲ್ಲ
ಕೆಲವೊಮ್ಮೆ ನನಗೇ ತಿಳಿಯದಾಗಿದೆ
ಈ ಗಾಯ ಅದೇನೆಂದು
ನಿನ್ನ ಇಲ್ಲದಿರುವಿಕೆ ನನ್ನನ್ನು ಕಾಡುತಿಲ್ಲ
ಬದಲಿ ನೀನಿಲ್ಲದ ನನ್ನ ಇರುವಿಕೆ!
ಅನ್ನಿಸುತ್ತಿದೆ, ನಾನು ಇದರೊಟ್ಟಿಗೆ ಅಜ್ಜನಾಗುತ್ತಿದ್ದೇನೆ
ಕೆಲವೊಮ್ಮೆ, ನಿನ್ನಂತೆ ನಾನು ನುಡಿದಾಗ
ಸ್ವಲ್ಪ
ಅನುಮಾನವಾಗುತ್ತದೆ
ಬಹುಷಃ ಕಾಲ ಗಾಯ ಮಾಸುತ್ತದಲ್ಲ
ಅದು ಹೀಗೆಂದು ಕಾಣುತ್ತದೆ
ನನ್ನನು ಸಂಪೂರ್ಣ ನಿನ್ನನಾಗಿಸಿ
It’s not
your words but silence
That hurt
the most!!
All these
days when you were around
Talking
ever ending nonsense
I never
dreamt of it
That, one
day it will be all over,
When you
will be gone
When, I
look myself into mirror
I see you
behind me
When, I
hear stairs tapping
I hear your
footsteps
When, I see
my doorbell ringing
I feel you
are standing outside
Now, when I
know it’s all a lie
Silence
fills the empty space again
Tearing
every bit of myself, And
Eating
every inch of my soul
If time can
heal pain
Though
decades pass by
Why isn’t
this healing?
Sometimes
it makes me doubt
If, it is
something greater than pain
It’s not
your absence that is hurting
It’s my own
presence without you
I think I
am aging old with this
Sometimes
when I speak like you
I doubt
myself if that was me
I think
this is how time heals things
By making me completely you
Comments
Post a Comment