ಬುರುಡಾಲಜಿ - ೧ - ತಪ್ಪುಗಳ ಬೆನಟ್ಟಿ


ನಮಗೇಕೆ ತಪ್ಪುಗಳು ಇನ್ನೊಬ್ಬರಲ್ಲಿ ಮಾತ್ರ ಕಾಣುತ್ತವೆ ? ನಮ್ಮಲ್ಲೇಕೆ ಕಾಣುವುದಿಲ್ಲ?

ಮಾನವ ಹುಟ್ಟುತಲೇ ಸ್ವಾರ್ಥಿಸತ್ಯದ ಹುಡುಕಾಟದಲ್ಲಿ ತನಗೆ ಸರಿ ತೋಚಿದ್ದನ್ನು ಅಧಮ್ಯ ಸತ್ಯವೆಂದು ನಂಬುವುದು ಅವನ ಗುಣ. ಹುಟ್ಟಿದಾತ ಬೆಳೆಯುತ್ತಾನೆ, ಹೀಗೆ ಬೆಳೆಯುತ್ತಾ ತಾನು ಗ್ರಹಿಸುವ ಅರಿವನ್ನು ತನ್ನ ನಂಬಿಕೆಯಾಗಿ ಬದಲಾಯಿಸುತ್ತಾ ಹೋಗುತ್ತಾನೆ. ಇದಕ್ಕೆ ಸಹಕರಿಸುವುದು ತನ್ನ ಅರಿವಿನಂತೆಯೇ ಮರುಕಳಿಸುವ ಘಟನೆಗಳು. ಒಮ್ಮೆ ನಂಬಿಕೆಯಾಗಿ ಬದಲಾದ ಅರಿವು ಕ್ರಮೇಣ ಅವನ ತತ್ವ ವಾಗುತ್ತದೆ. ಒಮ್ಮೆ ತತ್ವವಾದ ಅರಿವು ನಿಧಾನಕ್ಕೆ ನಡವಳಿಕೆ ಎನ್ನಿಸಿಕೊಳ್ಳುತ್ತದೆ . ಹೊಸದಾಗಿ ಕಂಡುಕೊಂಡ ಈ  ತತ್ವ ಅವನ ಮೂಲಕ ಆಚರಣೆಗೆ ಬರುತ್ತದೆ. ಹಾಗಾಗಿ ವ್ಯಕ್ತಿಯ ನಡವಳಿಕೆಯಲ್ಲಿ ಬಹಳ ಮುಕ್ಯ ಪಾತ್ರ ವಹಿಸುವುದು ತಾನು ಗ್ರಹಿಸುವ ಅರಿವು. ದಯವಿಟ್ಟು ತಾಳ್ಮೆ ಕಳೆದುಕೊಳ್ಳಬೇಡಿ ಇಲ್ಲಿ ಇನ್ನೊಬ್ಬರ ತಪ್ಪಿಗೂ ಅರಿವಿಗೂ ಏನು ಸಂಭಂಧ? ವಯ್ಯ ಬುರುಡೆ ಬಿಡ್ತಾನೆ ಅಂತ ...ಹಳಿ ಇರ್ಲಿ, ರೈಲೂ ಇಲ್ದಂಗ್ ಬಿಡ್ತಾವ್ನೆ ಅಂದ್ಕೋಬೇಡಿ. ನಾನು ಹೇಳುತ್ತಿರುವುದು ಕೂಡ ತಪ್ಪಿರಬಹುದು. ಆದರೆ, ಇದು ನಾನು ಗ್ರಹಿಸಿರುವ ಅರಿವು ಎಂದಷ್ಟೇ ನಾನು ಹೇಳಬಹುದು. ಇದೆ ಅಲ್ಟಿಮೇಟ್ ಸತ್ಯವೆಂದರೆ ನನ್ನ ಮಾತಿಗೆ ನಾನೇ ಕೊಂಟ್ರಡಿಕ್ಟ್ ಮಾಡಿದಂಗಾಗುತ್ತದೆ. ಸೊ ತಪ್ಪನು ನಾನು ಮಾಡುವುದಿಲ್ಲ. ಇದನ್ನು ಓದಿ ನಿಮ್ಮ ನಿಮ್ಮ ಅರಿವಿಗೆ ಸರಿಯೆನಿಸಿದರೆ ಮಾತ್ರ ಒಪ್ಪಿ. ಇಲ್ಲವಾದಲ್ಲಿ ಕೊಂಟ್ರಡಿಕ್ಟ್ ಮಾಡಿ, ಈ ಚರ್ಚೆಯಲ್ಲಿ ನಾನು ನೀನೆಂಬ ಅಹಮು ತೊರೆದು ವಿಚಾರ ಬೆಳೆದು ದೊಡ್ಡದಾಗಲಿ. ಸೊ ಕಮಿಂಗ್ ಟು ದಿ ಪಾಯಂಟ್, ಇಲ್ಲಿ ಗಮನಿಸಿ ..ಫಾರ್ ಎಗ್ಸ್ಯಾಂಪಲ್ ತಾನು ಎದುರಾಗುವ ವ್ಯಕ್ತಿ ತನ್ನ ನಂಬಿಕೆಗಳಿಗೆ ವಿರುಧ್ಧವಾಗಿ ನಡೆದುಕೂಂಡಾಗ ಏನಾಗುತ್ತದೆಂದು ? ತಾನು ಕಂಡುಕೊಂಡಿರುವ ಸತ್ಯಕ್ಕೆ ಇದು ಒಪ್ಪುವುದಿಲ್ಲ . ತನ್ನ ಅರಿವಿಗೆ , ತನ್ನ ಸತ್ಯಕ್ಕೆ , ತನ್ನ ನಡುವಳಿಕೆಗೆ ಇದು ಒಪ್ಪುವುದಿಲ್ಲ. ಸೊ ತಾನಲ್ಲದ ಆ ಇನ್ನೊಬ್ಬ ಮಾಡಿದ್ದು ತಪ್ಪಾಗಿ ಕಾಣುತ್ತದೆ. ಇಲ್ಲಿ ಬಹುತೇಕರು  ಮಾಡುವ ಇನ್ನೊಂದು ತಪ್ಪೆಂದರೆ ತನ್ನ ಅರಿವಿನ ಮೂಲಕ ಇನ್ನೊಬ್ಬರನ್ನು ಅಳೆದು ತೂಗುವುದು. ಸರಿ ತಪ್ಪಿನ ಗೋಜಲಿಗೆ ಇಳಿದು ರಾಡಿ ಮಾಡಿ, ನೀರನ್ನು ಕಲಕಿ ಗಬ್ಬಡ ಮಾಡಿ ದ್ವೇಷದ ಸೂಟ್ಕೇಸೆ ಕೀಲಿ ಓಪನ್ ಮಾಡಿ ಒಳಗೆ ಕೂತುಬಿಡುವುದು. ಇನ್ನು ಕಮಿಂಗ್ ಟು ದಿ ಸೆಕೆಂಡ್ ಕ್ವೆಶ್ಚನ್ ನಮ್ಮಲೆಕೆ ತಪ್ಪುಗಳು ಕಾಣುವುದಿಲ್ಲ? ನಮಗೆ ನಾವುಗಳು ಯಾವಾಗಲು ಸರಿಯೇ. ಏಕೆಂದರೆ ನಮ್ಮ ನಮ್ಮ ತತ್ವಗಳು ಎಷ್ಟು ಸರಿಯೆಂದು ನಮಗೆ ಹೇಗೆ ಗೊತ್ತಾಗಬೇಕು ? ನಾವುಗಳು ಗ್ರಹಿಸುರುವ ಅರಿವುಗಳು ಎಷ್ಟು ಸತ್ಯ ವೆಂದು ಹೇಗೆ ತಿಳಿಯಬೇಕು ? ಒಂದು ವೇಳೆ ಇದು ತಿಳಿದಿದ್ದರೆ ಎಲ್ಲರಿಗೂ ೧೦೦/೧೦೦ ಸಿಗಬೇಕಿತ್ತು ಜೀವನದ ಎಲ್ಲ ಪರೀಕ್ಷೆಗಳಲ್ಲಿ.

ಸೊ, ಇನ್ನೊಬ್ಬರನ್ನು ತಪ್ಪು ಎನ್ನುವ ಮೊದಲು ನೀವೆಷ್ಟು ಸರಿ ಎಂದು ಇವಾಲುವೇಟ್ ಮಾಡಿಕೊಳ್ಳಿ ಅಥವಾ ಅದರ ಗೋಜಲಿಗೆ ಬೀಳದೆ ಅವರವರು ಇರುವಂತೆ ಆಕ್ಸೆಪ್ಟ್ ಮಾಡಿಬಿಡಿ. ರಾಯರು ಹೇಳುವಂತೆ, ನೆಮ್ಮದಿ ಜೀವನಕ್ಕೆ ನೂರೊಂದು ಸೂತ್ರಗಳು ಅಂತಾರಲ್ಲ ಅದ್ರಲ್ಲಿ ಇದು ಒಂದಿರಬೇಕು ಯಾವನಿಗ್ ಗೊತ್ತು.



ತಪ್ಪುಗಳ ಹುಡುಕಿದೆ ಜಗವೆಲ್ಲ
ಯಾರೋ ಸರಿಯೆಂದು ಕಾಣಲಿಲ್ಲ
ಹುಡುಕಿದೆ ನನ್ನಲಿ
ಎಲ್ಲ ತಪ್ಪುಗಳ ಮೂಲವು
ನಾನೇ ಆಗಿರುವೆ ಎಂದು ತಿಳಿಯಿತು

- ಬುರುಡೆದಾಸ

Comments