ಆ ಸಿಹಿಗೆ


ನಿನ್ನ ಕಣ್ಣು ನನ್ನೀ ನೋಟವ 
ಬೆರೆತಾಗ ನನ್ನಲಿ ನಾ ಕಳೆದು ಹೋದೆ
ನಿನ್ನ ಮಾತು ನನ್ನೀ ಪದಗಳ
ಸೇರಿದಾಗ ನನ್ನನೇ ನಾ ಮರೆತುಹೋದೆ
ಅಲ್ಲೊಮ್ಮೆ ಇಲ್ಲೊಮ್ಮೆ ಬೆಪ್ಪಾಗಿ ನಿಲ್ಲುವೆ,
ಇದು ನಾನಾ ?
ಅಲ್ಲೆಲ್ಲೋ ಇಲ್ಲೆಲ್ಲೋ ಮಂಕಾಗಿ ಹೋಗುವೆ,
ಇದು ನಾನಾ ?
ಇದು ನಾನಲ್ಲದೆ ನೀನಾ ?
ಇಲ್ಲ, ಇದು ನಿನಲ್ಲ !  
ನೀನು ಕಲೆ ಇಲ್ಲದ ಚಂದಿರ,
ನೀನು ಕಹಿ ಇರದ ಬೇವು
ನಿನಲಿ ತಪ್ಪ ನಾ ಹುಡುಕಲಾರೆ !
ನಾನೇಕೆ ಹೀಗಾದೆ ?
ನಿಂತ ನೀರಿಗೆ ಹಾರಿಬಿದ್ದ ಕಲ್ಲಿನಂತೆ
ನನ್ನ ಮನವ ಅಲೆಯಲಿ ಕೆದಕಿ  
ನೀ ಸೇರಿದೆ ನನ್ನ ಮನದ ತಳ
ಈಗ ಅನ್ನಿಸುತ್ತಿದೆ,
ನಿನ್ನ ಸನೀಹವೇ ಮಜವಾಗಿದೆ,
ನಿನ್ನ ಸಾಮಿಪ್ಯವೆ ಪುಳಕವಾಗಿದೆ
ಒಗ್ಗಿಕೊಂಡು ಬಿಡುವೆನೋ ಏನೋ
ಆ ಸಿಹಿಗೆ,
ಉಕ್ಕಿ ಬರುವ ಭೂಕಂಪದ
ಆ ಲಾವಾ ತಂಪಿಗೆ  
 - ಬುರುಡೆ ದಾಸ 

Comments