ಈ
ಖಾಲಿ ಬಟ್ಟಲ ತುಂಬಲು
ಗೀಚಿದೆ
ನಾ, ಈ ಕವಿತೆ
ಕವಿತೆಯ
ತುಂಬೆಲ್ಲ ನೀನೆ ತುಂಬಿರುವೆ
ಭಾವದ
ತುಂಬೆಲ್ಲ ನೀನೆ ಹರಡಿರುವೆ
ಬರಡಾದ
ಈ ನೆಲದ
ತುಂಬೆಲ್ಲ
ನೀ ಹೂಳಿದ ನೇಗಿಲೆ
ಭಾರವಾದ
ಈ ಮೋಡದ
ತುಂಬೆಲ್ಲ
ನಿನ್ನ ಕಣ್ಣ ಹನಿಗಳೇ
ಈ ಬರಡು ನೆಲವ ಹೂಳಲು
ಭಾರ ಮೋಡವ ಸೀಳಲು
ಇರುವುದು ಬರೀ ಈ ಪದಗಳೇ
ಮೌನವೇ
ಸಾಲುಗಳಾಗಿ ಮೂಡುತಿವೆ
ಏಕಾಂತವೆ
ಪದಗಳಾಗಿ ಕೂಡುತಿವೆ
ಈ
ಸಾಲುಗಳ ತಡವಿ ನೋಡುವೆ
ಪದಗಳ
ಕೆದಕಿ ನೋಡುವೆ
ನೀನು
ಕಂಡರೂ ಕಾಣಬಹುದು
ನಾನು
ಕವಿಯಾದರೆ ನೀನೆ ಕವಿತೆ
ನಾನು
ಚಿತ್ರಗಾರನಾದರೆ ನೀನೆ ಚಿತ್ರ
ನಿನ್ನ
ಹಿರಿಮೆಯ ಹೇಗೆ ಹೇಳಲಿ
ಈ
ಪದಗಳಿಗೆ ಆ ಶಕ್ತಿ ಸಾಲದು
Comments
Post a Comment