ಬೆಳದಿಂಗಳ
ರಾತ್ರಿಯಲಿ ಅತ್ತ ರಾಹುಲನ
ಪ್ರೇಮದಿ
ಆಡಿಸಿದಳಾ ಯಶೋಧರೆ
ನೀ
ಬಿಟ್ಟು ಹೋದ
ಆ
ದಿನದ ನೆನೆಪ
ಯಾರ
ಬಳಿ ಹೇಳಿಕೊಳ್ಳಲಿ
ನೀ
ತೊರೆದು ಹೋದ
ಈ
ಬೆಳೆವ ಬೀಜವ
ಯಾವ
ನೆಲದಿ ಹೂಳಲಿ
ನಿನ್ನ
ಈ ಹುಡುಕಾಟದಿ
ನಾ ಬಳಲಿ
ಬೆಂಡಾದೆ
ನಿನ್ನ
ಈ ಸೆಣೆಸಾಟದಿ
ನಾ ಸೋತು
ಸುಣ್ಣಾದೆ
ಬೆರಗುಮಾಡಿದೆ
ನೀ
ಜಗವೆಂದು
ಚಿಂತಿಸಿ ಕೇಳದ
ಮೂಲ
ಪ್ರಶ್ನೆಗಳ ಕೇಳಿ
ಅಚ್ಚರಿ
ಮೂಡಿಸಿದೆ ನೀ
ಜಗವೆಂದು
ಇಣುಕಿ ನೋಡದ
ಮನದಾಳದ
ಮೂಲೆಗಳ ಕೆದಕಿ
ಒಮ್ಮೆಯೂ
ನೀನೇಕೆ ಕೇಳದಾದೆ
ನಿನ್ನ
ಕೈಹಿಡಿದ ನನಗೆ, ಇದ್ದವೇ ಸುಲಭ
ನೀನಿಲ್ಲದೆ
ಸವೆಸಿದ ಆ ದಿನಗಳು
ನೀ
ಹುಡುಕಿ ಹೊರಟೆ ಆಸೆಯ ಮೂಲ
ನಾ ಬೇಡುತ
ಕಳೆದೆ ನಿನ್ನಾಸೆಯ ಬಾಳ
ನನ್ನಾಸೆಯ
ನೀ ತೊರೆದು ನಡೆದೆ
ನಿನ್ನಾಸೆಯ
ನಾ ತೊರೆಯಲಾರೆ
ಒಂದು
ಕ್ಷಣವಾದರೂ ತಿರುಗಿ ಬಾ
ನನ್ನ
ಸಿದ್ದಾರ್ಥನಾಗಿ,
ನಮ್ಮೀ
ಮುದ್ದು ಕಂದನ ಅಪ್ಪನಾಗಿ
-
ಬುರುಡೆದಾಸ
Comments
Post a Comment