ಕೇಳಿದೆ ಎಲ್ಲರ
ನಾನು
ಏನಾಗಬೇಕೆಂದು
ಯಾರೂ ಉತ್ತರಿಸಲಿಲ್ಲ
ಕೇಳಿದೆ ಹೊವಲಿ,
ನೀನೇಕೆ ನಾನಗಲಿಲ್ಲೆಂದು?
ಬದಲಿ ನನ್ನನೇ ಕೇಳಿತು
ಯಾವ ಪ್ರೀತಿಗೆ ನೀನಾಗಲೆಂದು ?
ಕರೆದು ಸುಗಂಧವ ಸೂಸಿ ಹೇಳಿತು,
ಹುಟ್ಟಲಿ, ಮೊಗ್ಗಾಗಿ
ದೇವರ ಪಾದ ಸೇರುವೆ
ಯವ್ವನದಿ, ಪರಿಮಳವ ಪಸರಿಸಿ
ಎಡಬಿಡದೆ ಓಡಾಡುವ ದುಂಬಿಯ ಪ್ರೀತಿಸುವೆ
ಸಾವಲಿ, ನಿನ್ನ ಪ್ರೀತಿಸುವ
ನಿನ್ನ ಪ್ರೇಯಸಿಯ
ಮೂಡಿ ಸೇರಿ ಅವಳನೇ ಪ್ರೀತಿಸುವೆ
ನಾನೇಕೆ ನಿನಾಗಲಿ ?
ನನ್ನ, ನಾ ಇಷ್ಟು ಪ್ರೀತಿಸುವಾಗ ?
ಕೇಳಿದೆ ಇರುವೆಯ
ನೀನೇಕೆ
ನಾನಾಗಲಿಲ್ಲೆಂದು ?
ಬದಲಿ ನನ್ನನೇ ಕೇಳಿತು
ಯಾವ ಸ್ವಾರ್ಥಕೆ ನೀನಾಗಲೆಂದು ?
ಕರೆದು ತನ್ನ ಇರುವೆಸಾಲ
ತೋರಿಸಿ ಹೇಳಿತು
ಹುಟ್ಟುತಲೆ ಕಲಿತೆ,
ಇತರರಿಗೆ ಮನೆ.ಕಟ್ಟುವುದ
ಬೆಳೆಯುತಾ ಕಲಿತೆ,
ಇತರರಿಗೆ ಆಹಾರ ಕೂಡಿಹಾಕುವುದ
ಸಾಯುತ ಕಲಿತೆ,
ಕಟ್ಟಿದ ಮನೆಯ, ಇತರರಿಗೆ ಬಿಟ್ಟು ಹೋಗುವುದ
ನಾನೇಕೆ ನೀನಾಗಲಿ
?
ಕೊಡಲು ನಿನ್ನ ಬಳಿ
ಏನೂ ಇಲ್ಲದಿರುವಾಗ ?
ಕೇಳಿದೆ ಮರವ
ನೀನೇಕೆ
ನಾಗಲಿಲ್ಲೆಂದು ?
ಬದಲಿ ನನ್ನನೇ
ಕೇಳಿತು
ಯಾವ ಮೋಹಕೆ
ನೀನಾಗಲೆಂದು?
ಪ್ರೀತಿಸಿ ತನ್ನ
ನೆರಳ ನೀಡಿ
ತನ್ನ ಟೊಂಗೆಯಲಿ
ಆಲಂಗಿಸಿ ಹೇಳಿತು,
ಯಾರೋ ತಂದೊಗೆದ
ಬೀಜದಿ ಹುಟ್ಟಿದೆ,
ಎಂದೋ ಬೀಳುವ ಮಳೆಯ
ನೀರಲಿ ಬೆಳೆದೆ,
ನಿನ್ನ ಕೊಡಲಿಗೆ
ಮೌನದಿ ತಲೆಕೊಟ್ಟೆ
ನಿನಗೆ ನನ್ನ
ಗಾಳಿಯೇ ಬೇಕು
ನನ್ನ ನೇರಳೆ ಬೇಕು
ನಾನೇಕೆ ನೀನಾಗಲಿ
?
ಬೇಡಲು ನೀನೆ ನನ್ನ
ಬಳಿ ಬರುವಾಗ ?
ಏನು ಮಾಡೇಬೇಕೆಂದು
ಕೀಳುವುದ ಬಿಟ್ಟು
ಏನು ಮಾಡಬಾರದೆಂದು ಕೇಳಿದೆ
ಇದ್ದವು ಎಲ್ಲರ
ಬಳಿ ಸಾಲು ಸಾಲುತ್ತರ
- ಬುರುಡೆದಾಸ
Comments
Post a Comment