ಪಾಂಡೋರಾ



ಇಲ್ಲಿ ಎಲ್ಲವು ಸರಳ ಸ್ವಾಭಾವಿಕ
ಜೀವಿಗಳ ನಡುವೆ ಸಾಮರಸ್ಯ
ಯಾರೂ ಇವರಿಗೆ ಹೇಳಿಕೊಡೋಲ್ಲ
ಸಂಪನ್ಮೂಲಗಳ, ಇತರೆ
ಜೀವಿಗಳೊಂದಿಗೆ ಹಂಚಿಕೊಳ್ಳುವ ಸ್ವಭಾವ
ಯಾರೂ ಇವರಿಗೆ ಕಲಿಸೊಲ್ಲ
ಇಲ್ಲಿಯ ಮಾನವ, ಇತರೆ ಜೀವಿಗಳ
ಪಂಜರದಲಿ ಬಂಧಿಸಲು
ಅದೆಂದೂ ಯೋಚಿಸೊಲ್ಲ

ಇಲ್ಲಿಯ ಹದ್ದು ಹುಲಿ ಸಿಂಹಗಳು
ಇವರ ಫೈಟರ್ ಫ್ಲೈಟು, ಟ್ಯಾಂಕರುಗಳು
ಆದರೆ, ಹೀಗೆ ಒಬ್ಬರಿಗೊಬ್ಬರು
ಚಾಲಕ ವಾಹನಗಳಾಗೋ ಮುನ್ನ
ಒಬ್ಬರನ್ನಿನ್ನೊಬ್ಬರು ಒಪ್ಪತ್ತಾರೆ 
ಒಂದು ಜೀವಿವ ಜೀವಬಳ್ಳಿ,
ಇನ್ನೊಂದರೊಂದಿಗೆ ಸೇರಿ
ಒಂದರ ಮನದ ಮಾತುಗಳು
ಇನ್ನೊಂದಕ್ಕೆ ತಂತಾನೆ ತಿಳಿಯುವ
ಅತಿಮಾನುಷ ಬೆಸುಗೆ ಏರ್ಪಡುತ್ತದೆ 

ಇಲ್ಲಿಯ ಜೀವಿಗಳನ್ನು ಕಾಯುವುದು,
ಒಂದು ಬೃಹತ್ ಜೀವ ಮರ
ಈ ಮರವನ್ನು ಕಾಯುವುದು, ಇಲ್ಲಿಯ ಜೀವಿಗಳು
ಇದಕ್ಕೆ, ಇಲ್ಲಿಯ ಎಲ್ಲ ಜೀವಿಗಳೊಂದಿಗೂ
ಇರುವುದು ಒಂದು ಅಭೂತ ಬೆಸುಗೆ
ಇಲ್ಲಿಯ ಒಂದು ಪಿಳ್ಳೆಗೆ ಗಾಯವಾದರೂ
ಕೂಡಲೇ ಈ ಮರಕೆ ತಿಳಿವುದು 
ಇದರ ಒಂದು ಟೊಂಗೆ ಮುರಿದರೂ
 ಪ್ರತಿ ಜೀವಿಗೂ ತಿಳಿವುದು
ಇಲ್ಲಿ ಸತ್ತವರು, ಎಂದೋ ಸಾಯರು
ಆಗುವರು ಈ ಮರದ ಜೀವಸಾರ

ಇಲ್ಲಿ ಪ್ರಕೃತಿಯನ್ನು ಹೊರತುಪಡಿಸಿ
ಜೀವಿಯಿಲ್ಲ, ಜೀವಿಯ ಹೊರತುಪಡಿಸಿ
ಪ್ರಕೃತಿಯಿಲ್ಲ; ಒಂದಕ್ಕೆ ನೋವಾದರೆ
ಇನ್ನೊಂದು ಅಳುವುದು
ಒಂದಕ್ಕೆ ಖುಷಿಯಾದರೆ
ಇನ್ನೊಂದಕ್ಕೆ ನಗುವುದು  
ಇಲ್ಲಿ ಯಾವುದೂ ಹೆಚ್ಚಿಲ್ಲ
ಯಾವುದೂ ಕೊರತೆಇಲ್ಲ
ಸಮತೋಲನವೇ ಇಲ್ಲಿಯ ಕಾನೂನು

 ಹೀಗಿರುವಾಗ ಒಂದು ದಿನ,
 ಬರುವನು ನಮ್ಮ ನಿಮ್ಮಂತಿರುವ 
ಎಲ್ಲ ಬೇಕಿರುವ ನವಮಾನವ.
ಎಷ್ಟು ತಿಂದರು, ಅವನ ಹೊಟ್ಟೆ ತುಂಬದು.
ಇವರ ಮರವ ಕೊಂದು,
ಇವರನ್ನು ಇಲ್ಲಿಂದ ಓಡಿಸಿ,
 ಇಲ್ಲಿಂದ ಎಲ್ಲವ ದೋಚಿ 
ತನ್ನೊರಿನಲ್ಲಿ ಕೋಟೆಯ 
ಕಟ್ಟುವ ಉದ್ದೇಶ ಅವನದು 

ವಿಪರ್ಯಾಸವೆಂದರೆ, ಮರೆವೆವು ನಾವು,
ಸಿನಿಮಾದಲ್ಲಿ, ಇವರ ಸುಂದರ ಜಗದ ಮೇಲೆ
ದೌರ್ಜನ್ಯ ವೆಸಗಲು ಪ್ರಯತ್ನಿಸುವ,
ಜೀವ ಮರವನ್ನು ಕೊಂದು ತನ್ನ ಈರ್ಷೆ
ತೀರಿಸಿಕೊಳ್ಳುವ ಕ್ರೂರಿಗಳು
ನಾವುಗಳೇ ಆಗುತಿರುವೆವೆಂದು  

ಇದ್ದೆವು ನಾವೂ,   
ಇಲ್ಲಿಯ ಜೀವಿಗಳಂತೆ,  ನಮಲ್ಲಿ
ಕ್ರೂದ, ಅಸೂಯೆ, ಹೊಟ್ಟೆಉರಿ
ಹುಟ್ಟುವ ಮೊದಲು.
ಒಂದಾನೊಂದು ಕಾಲದಲ್ಲಿ
ಆಗಿತ್ತು ನಮ್ಮ ಲೋಕವು
ಪಾಂಡೋರಾ ಎಂದು

-      ಸದಾನಂದ


Comments