ಬಿಡಲೊಲ್ಲೆ ನಾನೇಕೆ


ಬಿಡಲೊಲ್ಲೆ ನಾನೇಕೆ
ನಿನ್ನ ಹಿಡಿದಪ್ಪುವ ಈ ಹುಚ್ಚು ಹಟವ ?

ಕಣ್ಣಿಗೆ ಕಾಣದ ಮಾಯಾಮ್ರುಗವ
ಬೆನ್ನಟ್ಟುವ ಅಸೆ ನಿನಗೇಕೋ ಓಮನವೇ  
ಕೈಯಿಗೆ ಸಿಗದ ಕಾಮನಬಿಲ್ಲ
ಬಿಗಿದಪ್ಪುವ ಆಸೆ ನಿನಗೇಕೋ ಓಛಲವೇ
ಗೊತ್ತೆನಗೆ,
ಓಡಿದಷ್ಟು ನಾದೂರ
ಓಡುವೆ ನೀ ಮತ್ತೊಂದೂರ
ಹಿಡಿದಷ್ಟು ನಾ ನಿನಭಾರ
ಹೆಚ್ಚುವೆ ನೀ ನಿನ್ನೆತ್ತರ

ಬಿಡಲೊಲ್ಲೆ ನಾನೇಕೆ
ನಿನ್ನ ಹಿಡಿದಪ್ಪುವ ಈ ಹುಚ್ಚು ಹಟವ ?
ನಿನಗಾಗಿ ನಾ ಬಂದಿರುವೆ ಈದೂರ
ಹೊತ್ತು ತಂದಿರುವೆ ಸವಿ ಕಂಪ ನನ್ನೂರ
ನಿನ್ನೋಟವ ತುಸುನಿಲ್ಲಿಸಿ
ಎದುರುಸಿರ ದಣಿವಾರಿಸಿ    
ಸುಂದರ ಸಂಜೆಯ ಈ ಶಾಂತ ಸವಿಯ
ಸವಿಯಲೋಲ್ಲೆ ನೀನೇಕೆ ಓ ಮೃಗವೇ

ಬಿಡಲೊಲ್ಲೆ ನಾನೇಕೆ
ನಿನ್ನ ಹಿಡಿದಪ್ಪುವ ಈ ಹುಚ್ಚು ಹಟವ ?
ನಿನಗಾಗಿ ನಾ ಬೆಳೆದಿರುವೆ ಈಎತ್ತರ
ತಿಳಿಯುತ ನಿನ್ನೆಳು ಬಣ್ಣಗಳ ಪ್ರತಿಯುತ್ತರ  
ಹಿಗ್ಗುವ ನಿನ್ನೆಪರಿಯ ತುಸುನಿಲ್ಲಿಸಿ
ಚಾಚುವ ನಿನ್ನೀಹೆಗಲ ಸುಧಾರಿಸಿ
ಬಿಸಿಲ ಮಳೆಯ ಈ ಸುಂದರ ಕಲಾಕೃತಿಯ
ನೋಡಲೋಲ್ಲೆ ನೀನೇಕೆ ಓ ಬಿಲ್ಲೆ

ಓ ಗುರುವೇ, ನಿನಗಾದರೂ ಗೊತ್ತೇ
ಅದೆಷ್ಟು ದೂರ ಓಡಬೇಕೆಂದು?
ಇನ್ನದೆಷ್ಟು ಎತ್ತರ ಬೆಳೆಯಬೇಕೆಂದು?

ಬಿಡಲೊಲ್ಲೆ ನಾನೇಕೆ?
ನಿನ್ನ ಹಿಡಿದಪ್ಪುವ ಈ ಹುಚ್ಚು ಹಟವ, ಈ ಹುಚ್ಚು ಚಟವ.

- ಸದಾನಂದ

Comments