ಅರಿಯೇಕೆ ನೀ?


ಅರಿಯೇಕೆ ನೀ, ಇವು
ಮತ್ತೆರಡು ಕಾಲಗಲೆಂದು?
ಕುದಿವುಯ ಸೂರ್ಯನ ಶಾಂತನೆ ನುಂಗಿ
ಚಿತ್ರಗಾರನ ಇರುಳ ಪಟಕೆ, ತಾರೆಗಳ ಪೋಣಿಸುವ
ಕತ್ತಲಿಗೆ ಅದೇಕೆ ಇಲ್ಲದ ತೆಗಳಿಕೆ?
ತಂಗಾಳಿಯ ಚಂದ್ರನ ಕೆಚ್ಹೆದೆಯಲಿ ಕೊಂದು
ಸವಿನೆದ್ದೆಯ ಮಾಯಾ ಲೋಕವ ಕ್ರೋದದಿ ಸುಡುವ
ಬೆಳಕಿಗೆ ಅದೇಕೆ ಇಲ್ಲದ ಹೊಗಳಿಕೆ?

ಅರಿಯೇಕೆ ನೀ, ಇವು
ಮತ್ತೆರಡು ಬಣ್ಣಗಲೆಂದು?
ಬಣ್ಣಗಳು ಮಾಡಿದ ತಪ್ಪನ್ನು ತೀಡಿ
ಕದಡಿದ ಚಿತ್ರಕೆ, ಚೌಕಟ್ಟ ಬಿಡಿಸುವ ಕಪ್ಪು
ಮಾಡದೇ ಚಿತ್ರವ ಇನ್ನಷ್ಟು ಸುಂದರ?
ಕತ್ತಲ ರಾತ್ರಿಯಲಿ ದಗ್ಗನೆ ಎರಗುವ
ದಿಗಿಲೆಬ್ಬಿಸುವ ಬಿಳುಪು 
ಅಲ್ಲವೇ ಕ್ರೂರ ಕಲ್ಪನೆಯ ಮತ್ತೊಂದು ಅವ್ರುತಿ?

ಕಪ್ಪೋಲು ಬಿಳುಪು  ಬಿಳುಪೊಳು ಕಪ್ಪು
ಹಗಲೊಳು ಇರುಳು ಇರುಲೊಳು ಹಗಲು
ಎಡಬಿಡದೆ ನೀನೋಡುವ ಕಣ್ಣಲಿ ಬೆರೆತಿರುವಾಗ
ನೋಡುವೆ ನೀನೇಕೆ, ಈ ಸುಂದರ ಜಗವ
ಕಪ್ಪು ಬಿಳುಪೆಂಬ ಗಾಜ ಕನ್ನಡಕದಲಿ?
ಅರೆಯೇಕೆ ನೀ ಈ ಭಿನ್ನತೆ
ಕೇವಲ ನಿನ್ನೊಳಗಿನ ಭಾವಗಳೆಂದು

- ಸದಾನಂದ 



Comments