ಅದೆಷ್ಟೋ ಬಾರಿ ಹುಡುಕಿ ಸೋತೆ
ಇದಕ್ಕೂತ್ತರವ ನಾನು
ಎಕ್ಸ್ ಈಕ್ವಲ್ಸ್ ಅದೇನೆಂದು.
ಚೆಡ್ಡಿ ಹಾಕಿ ಬಗಲು ಚೀಲ ತೊಟ್ಟು
ಗೊಣ್ಣೆ ಸುರಿಸುತಲಿ ಬಾಯಿಗೆ
ಪೆನ್ಸಿಲಿಡುವಾಗಂದರು ಇಟ್ಟುಕೋ
ಇದನ್ನು ಬಿಸ್ಕತ್ತುಗಲೆಂದು
ಕುಡಿ ಮೀಸೆ ತೀಡಿ ನೆಟ್ಟು ನೂಟ
ಬಾಕ್ಸು ಬಾಕ್ಸಿನ ಲೇಖಕ್ ಪುಸ್ತಕದಿ
ಕೊಲಿಡಿದು, ಗೊತ್ತಿದ್ದ ಉತ್ತರಕೆ
ಇವನೆಷ್ಟು ಹೇಳುವೇನೋ
ಎಂದೆಬ್ಬಿಸಿ ಬೊಟ್ಟು ಮಾಡಿ
ಕೇಳಲು ತಲೆ ತಗ್ಗಿಸಿ ನಿಂತಾಗ
ಮೀಸೆಯ ಮಾಸ್ತರೆಂದರು
ಎಕ್ಸ್ ಇಕ್ವಲ್ಸ್ ಹದಿನೈದು
ಕೈಗೇಣಿನ ಮೇಲಿನ 'ಗೋಸಗಳೆಂದು'
ಬೆವರಿಳಿಯುವ ಮಧ್ಯಾನದಿ
ಇನ್ನೈದು ಉತ್ತರಿಸದ
ಪ್ರಶ್ನೆಗಲುಳಿದ್ದಿದ್ದ ಕಡೆ ಹೊತ್ತಲಿ
ಅದೆಷ್ಟು ಬಾರಿ ಗೀಚಿ
ನೋಡಿದರೂ ಎತ್ತ ಸಮೀಕರಿಸಬೇಕೆಂಬ
ಕುರುಹಿರದ ನಡುಹೊತ್ತಲಿ
ಘಕ್ಕನೆ ಒಮ್ಮೆಲೇ ಅರಚುವ
ಕಾಶೋನ್ ಬೆಲ್ಲಿನ್ನ ಏರಿಳಿಯುವ
ಶಬ್ದಕೆ ಒಮ್ಮೆಲ್ಲೆ ಜೋರಾಗುವ
ಕಲಕಲಕುವ ಅಕ್ಷರದಿ ಕಟಕಟನೆ
ಕುಟ್ಟಿದಾಗ ನನ್ನಪ್ಪನ ಸೈಂಟಿಫಿಕ್
ಕ್ಯಾಲುಕುಲೇಟೊರ್ ಎಂದಿತು
ಎಕ್ಸ್ ಇಕ್ವಲ್ಸ್ "ಮ್ಯಾತ್ ಎರ್ರರ್"
ಇನ್ನದೆಷ್ಟು ಬಾರಿ ಹೂಡಕೆಬೇಕೋ
ನಾಕಾಣೆ ಎಕ್ಸ್ ಇಕ್ವಲ್ಸ್ ಅದೇನೆಂದು.
- ಸದಾನಂದ
Comments
Post a Comment