ದೊಡ್ಡಪ್ಪನ ನೆನಪಳಿ

ವೀಲು ಕುರ್ಚಿಯ ಮೇಲೆ
ಕರೆದೊಯ್ಯುವಾಗ ನಿನ್ನ 
ತಿಳಿಯಲ್ಲಿಲ್ಲ ನಂಗೇಕೆ ಆ ಸಂಜೆ  
ಸಾಯುವೆ ನೀ ಇನ್ನಿಷ್ಟು ಹೊತ್ತಲಿ 
ಅಳುತ್ತಿದ್ದೆ ಅಪ್ಪಿ ಕಡೆಗೆ 
ಒಂದೈದು ನಿಮಿಷ 

ಹೇಳಲಿಲ್ಲೇಕೆ ಅಂದು 
ಹತ್ತಿ ನೀ ಬರುತ್ತಿದ್ದಾಗ ಗರ್ವದಿ 
ನಿನ್ನ ದಶಕದ ರಾಜ್ದೂತವ 
ಬಾಯಲಿ ಸೊಟ್ಟದಿ ಹತ್ತಿರುತ್ತಿದ್ದ 
ವಿಲ್ಸ್ ಸಿಗರೇಟಿನ ಕೆಂಪು ಬೆಂಕಿ
"ನಿಲ್ಲಿಸು ಸುಡುವುದ ನನ್ನ"

ಹೇಳಿ ಹೋಗಬಾರದಿತ್ತೆ ಕಡೆಗೆ
ನುಡಿಯಲು ನಿನ್ನೊಟ್ಟಿಗೆ ಒಂದು ಮಾತ
ಯೋಚಿಸಲು ಹತ್ತೆಂಟು ಬಾರಿ 
ಊರ ಪಟೇಲ ನಾಯ್ಕ ಗೌಡ 
ಕೊಟ್ಟಿದ್ದೆ ನೀ ನನಗೇಕೆ
ಹುಟ್ಟಾಡಿಸಿ ಹರಟಿ ನಗುವ 
ಸ್ವಾತಂತ್ರವ ಯೂಚಿಸದೆ ಹಿಂದ್ಮುಂದು 

ಮೂಗಾಲಿ ತೂಗಾಡುವ ನಿನ್ನ 
ಆ ಆಕ್ಕ್ಷಿಜನ್ ಪೈಪುಗಳು
ಹೇಳಲ್ಲಿಲ್ಲ ನಂಗೇಕೆ  ಅಂದು 
ನಿನ್ನೊಟ್ಟಿಗೆ ಆಡುತಳಿ
ಕಳೆಯುವ ಈ ದಿನಗಳು 
ಮರುಕಳಿಸವು ಮತ್ತೆ ಮತ್ತೆಂದು 

ಇನ್ನ್ಯಾರೊಟ್ಟಿಗೆ ಆಡಲಿ ನಾನು 
ಎಡಬಿಡದೆ ರಮ್ಮಿ ಬ್ಲಾಫ್ಫು ಅಮೆರಿಕನ್ ಶೋ?

-  ಸದಾನಂದ 

Comments