ಆರ್ಕೇಸ್ಟ್ರ - ಒಂದು ಗದ್ಪದ್ಯ

ನಮ್ಮೂರು ಭದ್ರಾವತಿ. ಒಂದು ಕಾಲದಲ್ಲಿ ಕರ್ನಾಟಕದಲ್ಲೇ ಜಗದ್ವಿಕ್ಯಾತರಾಗುತ್ತಿದ್ದಂತ್ಹ ಕಲಾವಿದ್ರಿಗೆ ಕಾಲೊರಲು ಜಾಗಕೊಟ್ಟ ಮಹಾನ್ ತಾಯ್ನಾಡು. ಇಲ್ಲಿ ಗಣೇಶ ಹಬ್ಬಕ್ಕೆ ಗಣಪತಿಗೆ ಬೇಜಾರಾಗ್ದೆ ಇರ್ಲಿ ಅನ್ತ್ಲೋ, ಇಂತದ್ದೆ ದಿನ ಆಚರ್ಸ್ಬೇಕು ಅನ್ನೋ ಕಟ್ಪಾಡ್ ಇಲ್ದಿರೋ ರಾಜ್ಯೋತ್ಸ್ವಕ್ಕೆ ಸುತ್ಮುತ್ದೋರ್ ನೆಮ್ಮ್ದಿಯಾಗಿ ಮಕ್ಕೋದೆ ಇರ್ಲಿ ಅನ್ತ್ಲೋ  ಒಟ್ಟು, ಒಂದ್  ದೂಡ್ಡ್ ಪೆಂಡಾಲ್ ಹಾಕ್ಸಿ ಒಂದು ಆರ್ಕೇಶ್ಟ್ರ ಇಡಿಸ್ಬಿಡೋದು ಊರಿಗ್ 'ದೊಡ್ಡೋರು'ಅನ್ನಿಸ್ಕೊಳ್ಳೋರು ಮಾಡಿಸ್ಕೋಂಡ್ ಬಂದಿರೋ ರೂಢಿ.ಇಂತಹ ಆರ್ಕೇಶ್ಟ್ರ ಗಳಲ್ಲಿ ಎಷ್ಟೋ ಸರ್ತಿ ಇಂತಹವುಗಳ ತಂಡದ ಗುಂಗರೊ ಕೂದ್ಲಿನ ನಾಯ್ಕ ತನ್ನ ಏಕೋ ಹೊಡಿಸೋ ಮೈಕನ್ನು ಬಾಯಿಗೆ ಮೂವತ್ತು ಡಿಗ್ರಿ ಕೂನದಲ್ಲಿ ವಾಳಿಸಿ ಇಡ್ಕಂಡ್, ಮೈಕಷ್ಟೆ ಸಾಲದು ಅಂತ ತಾನೂ ಕೂಡ ಮೈಯನ್ನು ಸೆಂಟರ್ ಆಫ್ ಗ್ರ್ಯಾವಿಟಿ ಇಂದ ಸ್ವಲ್ಪ ವಾಲಿಸಿ  ತನ್ನದೇ ಭಂಗಿಯಲ್ಲಿ "ಭದ್ರಾವತಿ ಬ್ರದರ್ಸ್ ಅರ್ಪಿಸುವ ....."ಎನ್ನುತಾ ಶುರು ಮಾಡಿದ್ರೆ ಮುಗೀತು ಸುತ್ಮುತ್ಲೋರು ಅವತ್ತು ನಿದ್ದೆ ಮರ್ತ್ಬಿಡ್ಬೇಕು ಅಂತ ಸೂಚನೆ ಕೊಟ್ಟಂಗೆ. ಇಂತ ಮನರಂಜ್ನೆಟೈಮಲ್ಲಿ ಮೂಲೆಲ್ಲಿ ಚಡ್ಡಿ ಹಾಕ್ಕೊಂಡು ನಿಂತಿರ್ತಿದ್ದ ನಾನು ಎಷ್ಟೋ ಸರ್ತಿ ಇವರುಗಳ ಚಿತ್ರವಿಚಿತ್ರ ವಿನ್ಯಾಸಗ್ಗಳನ್ನ ನೋಡಿ ಅಂದ್ಕೋತಿದ್ದೆ, ಇವರೇಕೆ ಹೀಗೆ ಹೊರಗಡೆ ಬೆವರು ಕಿತ್ತುಕೊಳ್ಳೋ ಹಾಗೆ ಶಕೆ ಇದ್ರೂ ಹಿಂಗೆ ತಮಗೊಪ್ಪದ ಕಪ್ಪು ಕೋಟು ಬೋ ಟೈ ಹಾಕ್ಕೊಂಡು ಯಾವುದೋ ಸಿನಿಮಾದ ಯವ್ದೋ ಹಾಡನ್ನು ಹೀಗೆ ಕತ್ತೆ ತರ ಅರ್ಚ್ಕೋತಿರ್ತಾರೆ ಅಂತ ? ಕೊನೆಗೂ ಒಂದ್ ಶುಭ ಘಳಿಗೆಲ್ಲಿ ಒಂದೆರಡ್ಮೂರ್ಸರ್ತಿ ಮತ್ತೊಮ್ಮೆ ಮತ್ತೊಮ್ಮೆ ಅಂತ " ಕುಲದಲ್ಲಿ ಮೇಲಾವುದೋ" ಹಾಡು ಹೇಳಿದ್ಮೇಲೆ ಇವೃಗೆ ಪ್ಯಾಕಪ್ ಮಾಡೋ ಅನುಮತಿ ಸಿಕ್ಕಿರ್ತಿತ್ತು. ಇಂತಾ ಆರ್ಕೇಶ್ಟ್ರ ನೋಡಿದ್ದ ನಂಗೆ ಇವೃಗಳು ತಮ್ಮದಲ್ಲದ ಒಂದು ಭಂಗಿಯನ್ನ ತಮ್ಮದನ್ನಾಗಿ ಮಾಡಿಕೊಂಡು ಹೀಗೇಕೆ ಸಿದ್ದರಾಗಿರ್ತಿರ್ತೀರ್ತಿದ್ರು ಅನ್ನೋ ಪ್ರಶ್ನೆಗೆ ಉತ್ತರ ಮೊನ್ನೆ ನಾನು ವ್ಯಾಸಂಗ ಮಾಡುತ್ತಿರುವ ಜಾಗದಲ್ಲಿ ನಿಜವಾದ ಆರ್ಕೇಸ್ಟ್ರ ನೋಡೋಕ್ ಅವ್ಕಾಶ ಸಿಕ್ಕಾಗ ಸಿಕ್ತು ಅನ್ನ್ಬೋದು.ಅದೊಂದು ಸಂಗೀತದ ರಸದೌತಣ .ರೀ. 'ಅದೇನು ಶಿಸ್ತು ಅದೇನು ಪದ್ದತಿ' ಎರಡು ಕಣ್ಣು ಸಾಲದು. ಇಂದೇ ನನಗೆ ಅನ್ನಿಸಿದ್ದು ಸಂಗೀತಕ್ಕೆ ಭಾಷೆಯೇ ಇಲ್ಲ ಎಂದು.

ಸಂಗೀತಕ್ಕೆ ಇರುವ ಶಕ್ತಿ ಅದನ್ನು ಹೇಳುವ ಪದ್ದತಿಯನ್ನು ಹೊರತುಪಡಿಸಿರುವಂತಹದ್ದು ಎನ್ನಿಸುತ್ತದೆ. ಸಂಗೀತವನ್ನು ಯಾವ ಪದ್ದತಿಯಲ್ಲಿ ಉಣಬಡಿಸಿದರು ಹೊಟ್ಟೆ ತುಂಬುತ್ತದೆ. ಕೆಲವರಿಗೆ ಕೆಲವು ಪ್ರಕಾರಗಳೂ ಹತ್ತಿರವಾದರೆ ಇನ್ನು ಕೆಲ್ವೃಗೆ ಕೆಲ್ವು. ಹೇಳುವ ಭಾವಗಳು, ಪ್ರಕಾರ್ಗಳು ಬಿನ್ನಹವಿಸ್ಬಹುದೆ ಹೊರ್ತು ಅದು ಹೇಳ ಹೊರಟಿರುವ ಭಾವಗಳು, ಬಹುತೇಕ ಕಲೆಗಳಿಗಿರುವಂತೆ ಭಾಷೆಯನ್ನು ಹೊರತುಪಡಿಸಿ ತನ್ನ ಕುಶಲತೆಯನ್ನು ಪಸರಿಸುವ ಶಕ್ತಿ ಅಭೂತಪೂರ್ವವಾಗಿ ನೋಡಬಹುದು. ಇಂತಹ ಸಂದರ್ಭದಲ್ಲಿ ಈ ಕೆಳಗಿನಂತೆ ಸಾಲುಗಳು ಅದೇಕೋ ಈ ರೀತಿ ಹುಟ್ಟಿಕೊಂಡಿವೆ 

ಅವನ ಕಡ್ಡಿಯ ಲಯಕ್ಕೆ
ಕ್ಷಣ ಕ್ಷಣವೂ ಹುಟ್ಟುತಿವೆ
ನೂರೆಂಟು ಧ್ವನಿಗಳು
ಪ್ರತಿಧ್ವನಿಸುವ ನೂರೆಂಟು
ಚಂಚಲ ರಸ ಭಾವಗಳು
ಹುಟ್ಟುತಲೇ ಹರಿದು ಹೋಗುತಿವೆ
ತಮ್ಮತಮ್ಮವೆ ದಿಕ್ಕಿಗೆ
ಸಿಕ್ಕೂ ಸಿಗದೆ ಕಣ್ಣಂಚಿನ
ಮಾಯ ಲೋಕಕೆ.


ನಾನು ಹಿಂದೆಂದೊ ನೋಡಿರದ
ಈ ನೆರೆಕೂದಲ ಕಪ್ಪುಕೋಟಿನ
ಮಾಂತ್ರಿಕ,ಅಧ್ಹೇಗೆ ಹಿದಿಟ್ಟಿಹನೋ
ನಾಕಾಣೆ ತನ್ನೀ ಬಳುಕುವ
ನಾಕಿಂಚಿನ ಕಡ್ಡಿಯಲಿ
ಕ್ಷಣದಿ ಏರಿಸುತ ಬಾನಿಗೆ
ಕ್ಷಣದಿ ಮುಳುಗಿಸುತ ಕಡಲಾಳಕೆ
ಬೆಪ್ಪಾಗಿಸುತ ಒಮ್ಮೆಲೇ ಎಲ್ಲರನು.

-  ಸದಾನಂದ 

Comments